KSRP SRPC RECRUITMENT 2024- ನಮಸ್ಕಾರ ಎಲ್ಲರಿಗೂ ಇಂದಿನ ಹೊಸ ನೇಮಕಾತಿ ಲೇಖಾನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 20000 ಕ್ಕೂ ಅಧಿಕ ಹುದ್ದೆಗಳು ಇನ್ನು ಖಾಲಿ ಇವೆ. ಖಾಲಿಯಿರುವ 20000ಕ್ಕೂ ಹೆಚ್ಚು ಹುದ್ದೆಗಳ ಪೈಕಿ ಈಗ 2023-24ನೇ ಸಾಲಿನ ಸರ್ಕಾರವು ಅನುಮತಿ ನೀಡಿರುವ ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ 1500 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿಯನ್ನು ನೀಡಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳ ಕುರಿತಂತೆ ಇನ್ನು ಯಾವುದೇ ದಿನಾಂಕಗಳನ್ನು ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಿಲ್ಲವಾದರೂ ಮುಂದಿನ ಅಧಿಸೂಚನೆಗಳ ಮೂಲಕ ನಿರ್ದಿಷ್ಟವಾಗಿ ತಿಳಿದುಕೊಳ್ಳಬಹುದಾಗಿರುತ್ತದೆ. ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಉಪ್ಡೇಟ್ಸ್ಗಳನ್ನು ಪಡೆದುಕೊಳ್ಳಲು JOBSKANNADA.COM ನೊಂದಿಗೆ ಸಂಪರ್ಕದಲ್ಲಿರಿ.
KSRP SRPC RECRUITMENT 2024
ಸರ್ಕಾರ ಅನುಮತಿಸಿರುವ ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) 1500 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ, ಪ್ರಶಂಸನೀಯ ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಕಲ್ಯಾಣ ಕರ್ನಾಟಕೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಮೀಸಲಿರಿಸಲಾಗಿರುವ ಹುದ್ದೆಗಳ ಕುರಿತು ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಈ ವರ್ಗೀಕರಣದ ಜತೆಗೆ ಯಾವ್ಯಾವ ಪಡೆಗಳಲ್ಲಿ ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ಪೊಲೀಸ್ ಇಲಾಖೆ ಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂದು ಕನಸುಳ್ಳ ಅಥವಾ ಅರ್ಹತೆಗಳನ್ನು ಪೂರೈಸುವವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
KSRP SRPC RECRUITMENT 2024
ಹುದ್ದೆಗಳು | ಹುದ್ದೆಗಳ ವರ್ಗೀಕರಣ |
ಎಸ್‌ಆರ್‌ಪಿಸಿ (ಪುರುಷ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು | 1392 |
ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕೇತರ ಒಟ್ಟು ಹುದ್ದೆಗಳು | 30 |
ಎಸ್‌ಆರ್‌ಪಿಸಿ (ಮಹಿಳೆ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು | 78 |
ಎಸ್‌ಆರ್‌ಪಿಸಿ (ಪುರುಷ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು | 591 |
ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕ ಹುದ್ದೆಗಳು | 12 |
ಎಸ್‌ಆರ್‌ಪಿಸಿ (ಮಹಿಳೆ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು | 11 |
1500 ಎಸ್_ಆರ್_ಪಿಸಿ ಕಾನ್ಸ್_ಟೇಬಲ್ | ಅಧಿಸೂಚನೆ LINK |
ಇದನ್ನು ಸಹ ಓದಿ: IAF ನೇಮಕಾತಿ 2024! ಭಾರತೀಯ ವಾಯುಪಡೆ ಅಗ್ನಿವೀರ್ ವಾಯು ಹುದ್ದೆಗಳಿಗೆ PUC ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ!
ksrp srpc 1500 posts ಹುದ್ದೆಗಳ ವರ್ಗಿಕರಣ
ksrp srpc 1500 posts ಅರ್ಹತಾ ಮಾನದಂಡಗಳು
ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ವಿದ್ಯಾರ್ಹತೆ ಏನು?
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ವಯೋಮಿತಿ ಅರ್ಹತೆಗಳೇನು?
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಇದನ್ನು ಸಹ ಓದಿ: NFL ನೇಮಕಾತಿ 2024 ! ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಇಂಜಿನಿಯೆರ್ 97 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ವೇತನ 1.40.000!!
ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್ ಆಯ್ಕೆ ವಿಧಾನಗಳು ಯಾವುವು?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳನ್ನು ಹಂತ ಹಂತವಾಗಿ ನಡೆಸಿ ಆಯ್ಕೆ ಮಾಡಲಾಗುತ್ತದೆ.
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.