ATHMASHAKTHI MULTIPURPOSE CO-OPERATIVE SOCIETY RECRUITMENT: ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ವಿವಿಧ ಹುದ್ದೆಗಳಿಗೆ SSLC ಆಗಿರುವವರು ಅರ್ಜಿ ಸಲ್ಲಿಸಿ..!

       JOIN WHATSAPP GROUP Join Now
       JOIN TELEGRAM GROUP Join Now

ATHMASHAKTHI MULTIPURPOSE CO-OPERATIVE SOCIETY RECRUITMENT- ನಮಸ್ಕಾರ ಎಲ್ಲರಿಗೂ ಇಂದಿನ ಹೊಸ ನೇಮಕಾತಿ ಲೇಖಾನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಇಂದಿನ ಲೇಖನದಲ್ಲಿ ಆತ್ಮಶಕ್ತಿ ವಿವಿದ್ದೋದ್ದೆಶ ಸಹಕರೀ ಸಂಘ ಮಂಗಳೂರು ವತಿಯಿಂದ ಹೊಸ ನೇಮಕಾತಿಯ ಸುತ್ತೋಲೆಯನ್ನು ಹೊರಡಿಸಿದ್ದು ಸುಮಾರು 62 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದಾರೆ ಅರ್ಹ ಅಥವಾ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು ಮತ್ತು ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಪರಿಶೀಲಿಸಬಹುದು .

ATHMASHAKTHI MULTIPURPOSE CO-OPERATIVE SOCIETY RECRUITMENT 2024

62 ವಿವಿಧ ಹುದ್ದೆಗಳ ನೇಮಕಾತಿಗೆ ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ಸುತ್ತೋಲೆಯನ್ನು ಹೊರಡಿಸ್ದದು ಕಚೇರಿ ನಿರೀಕ್ಷಕರು, ಗುಮಾಸ್ತರು ಮತ್ತು ವಾಹನ ಚಾಲಕರ ಹುದ್ದೆಗಳು ಸೇರಿದಂತೆ 62 ಹುದ್ದೆಗಳ ನೇಮಕಾತಿಗೆ ದಿನಾಂಕ 20/06/2024 ರಿಂದ ಅರ್ಜಿಗಳನ್ನು ವಿತರಿಸಲಾಗುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05/07/2024 ರಂದು ಅಥವಾ ಮೊದಲು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಇನ್ನುಳಿದಂತೆ ಹೆಚ್ಚಿನ ಮಾಹಿತಿಗಾಗಿ ಲೇಖಾನಾವನ್ನು ಸಂಪೂರ್ಣವಾಗಿ ಓದಿ.

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಅಧಿಸೂಚನೆ

ಸಂಸ್ಥೆಯ ಹೆಸರು ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ
ಹುದ್ದೆಗಳ ಸಂಖ್ಯೆ 62
ಉದ್ಯೋಗ ಸ್ಥಳ  ಕರ್ನಾಟಕ
ಹುದ್ದೆಯ ಹೆಸರು ಕಚೇರಿ ನಿರೀಕ್ಷಕರು, ಗುಮಾಸ್ತರು ಮತ್ತು ವಾಹನ ಚಾಲಕರ ಹುದ್ದೆಗಳು
ವೇತನ ರೂ.17000-58950/- ಪ್ರತಿ ತಿಂಗಳು

ಇದನ್ನು ಸಹ ಓದಿ: MYSURU CITY CORPORATION RECRUITMENT 2024: ಮೈಸೂರು ಮಹಾನಗರ ಪಾಲಿಕೆ 252 ಭರ್ಜರಿ ಹುದ್ದೆಗಳ ನೇಮಕಾತಿ. ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ..!

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಹುದ್ದೆಗಳ ವಿವರ

ಹುದ್ದೆಯ ಹೆಸರು  ಹುದ್ದೆಗಳ ಸಂಖ್ಯೆ
ಕಚೇರಿ ಅಧೀಕ್ಷಕರು   01
ಲೆಕ್ಕಿಗರು    02
ವ್ಯವಸ್ಥಾಪಕರು    13
ಹಿರಿಯ ಗುಮಾಸ್ತರು    02
ಕಿರಿಯ ಗುಮಾಸ್ತರು    41
ವಾಹನ ಚಾಲಕರು    01
ಅಟೆಂಡರ್ / ಗುಮಾಸ್ತ  02
ಒಟ್ಟು ಹುದ್ದೆಗಳು 62

ಇದನ್ನು ಸಹ ಓದಿ: BOBCARD ನೇಮಕಾತಿ 2024: ಬ್ಯಾಂಕ್ ಆಫ್ ಬರೋಡದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ –

  1. ಕಚೇರಿ ಅಧೀಕ್ಷಕರು /ಮಾನವ ಸಂಪನ್ಮೂಲಾಧಿಕಾರಿ ಹುದ್ದೆಗೆ ವಿದ್ಯಾರ್ಹತೆ :
    ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದ ಎಂ.ಕಾಂ/ಎಂ.ಬಿ.ಎ. ಎಮ್.ಎಸ್.ಡಬ್ಲೂ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಈ ಬಗ್ಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸಬೇಕು.
  2. ಲೆಕ್ಕಿಗರು ಹುದ್ದೆಗಳಿಗೆ ವಿದ್ಯಾರ್ಹತೆ :
    ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದ ಬಿ.ಕಾಂ/ಬಿ.ಬಿ.ಎ ,ಎಂ.ಕಾಂ/ಎಂ.ಬಿ.ಎ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಈ ಬಗ್ಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸಬೇಕು.
  3. ಶಾಖಾಧಿಕಾರಿ/ಹಿರಿಯ ಗುಮಾಸ್ತರು ಕಿರಿಯ ಗುಮಾಸ್ತರು ಹುದ್ದೆಗಳಿಗೆ ವಿದ್ಯಾರ್ಹತೆ :
    ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾನಿಲಯದ ಬಿ.ಕಾಂ/ಬಿ.ಬಿ.ಎ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು ಕನಿಷ್ಟ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಈ ಬಗ್ಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸಬೇಕು.
  4. ಜವಾನ ಮತ್ತು ವಾಹನ ಚಾಲಕ ಹುದ್ದೆಗಳಿಗೆ ವಿದ್ಯಾರ್ಹತೆ :
    ಜವಾನ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕರ್ನಾಟಕ ಸರ್ಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
    * ವಾಹನ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕರ್ನಾಟಕ ಸರ್ಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್‌.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಹಾಗೂ ಕನಿಷ್ಟ 2 ವರ್ಷಗಳ ಕಾಲ ವಾಹನ ಚಾಲನೆ ಅನುಭವ ಇರತಕ್ಕದ್ದು.

ATHMASHAKTHI MULTIPURPOSE CO-OPERATIVE SOCIETY RECRUITMENT- ವಯೋಮಿತಿ

ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯ ಗರಿಷ್ಠ ವಯೋಮಿತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದರೆ 40 ವರ್ಷ, ಇತರ ಹಿಂದುಳಿದ ಜಾತಿ ಮತ್ತು ವರ್ಗ ದವರಿಗೆ 38 ವರ್ಷ ಹಾಗೂ ಇತರರು 35 ವರ್ಷ ವಯೋಮಿತಿಯನ್ನು
ಮೀರಿರಬಾರದು.

ATHMASHAKTHI MULTIPURPOSE CO-OPERATIVE SOCIETY RECRUITMENT
ATHMASHAKTHI MULTIPURPOSE CO-OPERATIVE SOCIETY RECRUITMENT

ATHMASHAKTHI MULTIPURPOSE CO-OPERATIVE SOCIETY RECRUITMENT-ಅರ್ಹತಾ ಷರತ್ತುಗಳು

  • ಭಾರತೀಯ ನಾಗರಿಕನಾಗಿರತಕ್ಕದ್ದು.
  • ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.
  • ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
  • ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತಾ ಷರತ್ತುಗಳು ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.

ATHMASHAKTHI MULTIPURPOSE CO-OPERATIVE SOCIETY RECRUITMENT-ಆಯ್ಕೆ ವಿಧಾನ

ಕಚೇರಿ ಅಧೀಕ್ಷಕರು/ಮಾನವ ಸಂಪನ್ಮೂಲಾಧಿಕಾರಿ, ಲೆಕ್ಕಿಗರು, ಶಾಖಾ ವ್ಯವಸ್ಥಾಪಕರು/ಶಾಖಾಧಿಕಾರಿ, ಹಿರಿಯ ಗುಮಾಸ್ತರು, ಕಿರಿಯ ಗುಮಾಸ್ತರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಎಲ್ಲಾ ಅಭ್ಯರ್ಥಿಗಳಿಗೆ ಈ ಕೆಳಕಂಡ ವಿಷಯಗಳ ಕುರಿತಂತೆ 200 ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.
ಲಿಖಿತ ಪರೀಕ್ಷೆಯ ವಿಷಯಗಳು :-
1. ಕನ್ನಡ ಭಾಷೆ  :- 50 ಅಂಕಗಳು
2. ಸಾಮಾನ್ಯ ಜ್ಞಾನ  :-  25 ಅಂಕಗಳು
3. ಇಂಗ್ಲೀಷ್ ಭಾಷೆ  :-   25 ಅಂಕಗಳು
4. ಸಹಕಾರ  :-   50 ಅಂಕಗಳು
5. ಭಾರತದ ಸಂವಿಧಾನ  :-   25 ಅಂಕಗಳು
6. ಸಮಾಜದ ಯುಕ್ತವಾದ ಚಟುವಟಿಕೆ  :-  25 ಅಂಕಗಳು

ಇದನ್ನು ಸಹ ಓದಿ:  RRB ನೇಮಕಾತಿ 2024: ರೈಲ್ವೆ ನೇಮಕಾತಿ ಮಂಡಳಿ ಭರ್ಜರಿ 18799 ಹುದ್ದೆಗಳ ನೇಮಕಾತಿಗೆ SSLC/PUC ಆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ..!

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಅರ್ಜಿ ಸಲ್ಲಿಸುವುದು ಹೇಗೆ

  • ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರಿ ಸಂಘ ಮಂಗಳೂರು ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಅರ್ಹತೆ ಮತ್ತು ಮಾನದಂಡ ಪೂರೈಸುತ್ತೇವೆಯೇ ಎಂದು ಪರೀಕ್ಷಿಸಿಕೊಳ್ಳಿ. ನೇಮಕಾತಿ ಅಧಿಸೂಚನೆ ಲಿಂಕ್ ಕೆಳಗೆ ನೀಡಲಾಗಿದೆ.
  • ನಂತರ ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರಿ ಸಂಘ ಅದಿಕ್ರುತ ವೆಬ್ಸೈಟ್ ಗೆ ಭೇಟಿನೀಡಬೇಕು
  • ಉದ್ಯೋಗ ವಿಭಾಗಕ್ಕೆ ಭೇಟಿ ನೀಡಿ ನೇಮಕಾತಿಯ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  • ನಂತರ ಕೇಳಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು.
  • ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ, ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸತಕ್ಕದ್ದು.
  • ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು.
  • ಭರ್ತಿ ಮಾಡಿದ ಅರ್ಜಿಗಳನ್ನೊಳಗೊಂಡ ಲಕೋಟೆಯನ್ನು ಅಂಚೆ ಮೂಲಕ ದಿನಾಂಕ 05-07-2024ರ ಸಂಜೆ 5.00 ಗಂಟೆಯೊಳಗೆ ಸಂಘದ ಪ್ರಧಾನ ಕಚೇರಿಗೆ ತಲುಪುವಂತೆ ಇರಬೇಕು. ನಿಗದಿತ ದಿನಾಂಕ ಮತ್ತು ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಕಡ್ಡಾಯವಾಗಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳತಕ್ಕದ್ದು ಹಾಗೂ ನೀಡಿರುವ ಸೂಚನೆಗಳನ್ವಯ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ತಪ್ಪು ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ಅರ್ಜಿಯು ತಿರಸರಿಸಲಾಗುವದು.

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಪ್ರಮುಖ ದಿನಾಂಕಗಳು

ಅರ್ಜಿಯನ್ನು ವಿತರಿಸುವ ದಿನಾಂಕ – 20/06/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05/07/2024

ಆತ್ಮಶಕ್ತಿ ವಿವಿದ್ದೋದ್ದೆಶ ಸಹಕಾರೀ ಸಂಘ ನೇಮಕಾತಿ ಪ್ರಮುಖ ಲಿಂಕ್ ಗಳು

ಅಧಿಸೂಚನೆ ಲಿಂಕ್ :-  ಇಲ್ಲಿ ಕ್ಲಿಕ್ ಮಾಡಿ
ಕಿರು ಅಧಿಸೂಚನೆ ಲಿಂಕ್  :-  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ವಿತರಣೆಯ ಲಿಂಕ್  :-  ಇಲ್ಲಿ ಕ್ಲಿಕ್ ಮಾಡಿ  
ಅಧಿಕೃತ ವೆಬ್ಸೈಟ್  :-  ಇಲ್ಲಿ ಕ್ಲಿಕ್ ಮಾಡಿ 

       JOIN WHATSAPP GROUP Join Now
       JOIN TELEGRAM GROUP Join Now

Latest Posts

JOBS BY QUALIFICATION

ಜಿಲ್ಲಾವಾರು ಉದ್ಯೋಗ ಮಾಹಿತಿ