Grama Panchayat Recruitment 2024: ನಮಸ್ಕಾರ ಎಲ್ಲರಿಗೂ ಇಂದಿನ ನಮ್ಮ ಹೊಸ ನೇಮಕಾತಿ ಕುರಿತ ಲೇಖನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಕರ್ನಾಟಕ ಗ್ರಾಮ ಪಂಚಾಯಿತಿಗಳಲ್ಲಿ ಕಾಲಿಯಿರುವ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ವಾಟರ್ ಆಪರೇಟರ್, ಸ್ವಚ್ಛತಾಗಾರರು ಹುದ್ದೆಗಳು ಸೇರಿದಂತೆ ಒಟ್ಟು 6,026 ಗ್ರಾಮಪಂಚಾಯತಿಗಳಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿಯ ಸಂಬಂದಿತ ಸುತ್ತೋಲೆಯನ್ನು ಬಿಡುಗಡೆಮಾಡಿದ್ದೂ 886 ಹುದ್ದೆಗಳಿಗೆ ಅರ್ಜಿಯನ್ನು ಕೆಲವು ದಿನಗಳಲ್ಲಿ ಕರೆಯಲಾಗುತ್ತವೆ ಮುಂದಿನ ದಿನಗಳಲ್ಲಿ ಗ್ರಾಮಪಂಚಾಯತಿ ಹುದ್ದೆಗಳಿಗೆ ಆಯಾ ಜಿಲ್ಲೆಗಳಿಗೆ ಸಂಬಂಧಪಟ್ಟ ಅಧಿಕೃತ ಜಾಲತಾಣಗಳಲ್ಲಿ ಅರ್ಜಿಯನ್ನ ಕರೆಯಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಅಫೀಷಿಯಲ್ ವೆಬ್ಸೈಟ್ JOBSKANNADA ದೊಂದಿಗೆ ಸಮಪರ್ಕದಲ್ಲಿರಿ.
Grama Panchayat Recruitment 2024
ರಾಜ್ಯಾದ್ಯಂತ ಗ್ರಾಮ ಪಂಚಾಯತಿಗಳಲ್ಲಿ ಕೆಳ ಹಂತದ ವಿವಿಧ ಹುದ್ದೆಗಳು ಖಾಲಿ ಇದ್ದು: ಇವುಗಳ ಭರ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಈಗ ನೀಡಿರುವ ಆದೇಶವು ಸುತ್ತೋಲೆಯಾಗಿದ್ದು ಮುಂದಿನ ದಿನಗಳಲ್ಲಿ ಎಷ್ಟು ಹುದ್ದೆಗಳು ಯಾವಾ ಜಿಲ್ಲೆಗಳಲ್ಲಿ ಎಂಬ ಸಂಪೂರ್ಣ ಮಾಹಿತಿಗೆ ಮುಂದಿನ ಆದೇಶ ಎಂದರೆ ಮತ್ತೊಂದು ನೋಟಿಫಿಕೇಶನ್ ಗೆ ಕಾಯಬೇಕಾಗುತ್ತದೆ .
ಗ್ರಾಮ ಪಂಚಾಯತಿಗಳಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ? ಅವುಗಳ ಭರ್ತಿಗೆ ಮಾನದಂಡಗಳೇನು? ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು? ಅರ್ಜಿ ಸಲ್ಲಿಕೆ ಹೇಗೆ? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನು ಸಹ ಓದಿ: KSSFCL ನೇಮಕಾತಿ 2024: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ-ಆಪರೇಟಿವ್ ಲಿಮಿಟೆಡ್ ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!
Grama Panchayat Recruitment 2024:ಅಧಿಸೂಚನೆ
ಸಂಸ್ಥೆಯ ಹೆಸರು | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ |
ಹುದ್ದೆಗಳ ಸಂಖ್ಯೆ | 886 |
ಉದ್ಯೋಗ ಸ್ಥಳ | ಕರ್ನಾಟಕದಲ್ಲಿ |
ಹುದ್ದೆಯ ಹೆಸರು | ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು, ವಾಟರ್ ಆಪರೇಟರ್, ಸ್ವಚ್ಛತಾಗಾರರು |
ವೇತನ | ನಿಯಮಾವಳಿಗಳ ಪ್ರಕಾರ |
Grama Panchayat Recruitment 2024: ಯಾವೆಲ್ಲ ಹುದ್ದೆಗಳು ಖಾಲಿ ಇವೆ?
ರಾಜ್ಯದಲ್ಲಿ ಒಟ್ಟು 6,026 ಗ್ರಾಮ ಪಂಚಾಯತಿಗಳಿದ್ದು ಇವುಗಳಲ್ಲಿ ಸಾವಿರಾರು ಗ್ರಾಮ ಪಂಚಾಯತಿಗಳಲ್ಲಿ ಕೆಳ ಹಂತದ ನಾಲ್ಕು ವೃಂದದ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಇದೀಗ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಆಯಾ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾಗಳಿಗೆ ಆದೇಶ ನೀಡಿದೆ. ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿವೆ:
- ಬಿಲ್ ಕಲೆಕ್ಟರ್
- ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು
- ವಾಟರ್ ಆಪರೇಟರ್
- ಸ್ವಚ್ಛತಾಗಾರರು
ಇದನ್ನು ಸಹ ಓದಿ: NMDC ನೇಮಕಾತಿ 2024: ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ 81 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!
Grama Panchayat Recruitment 2024: ನೇಮಕಾತಿ ಮಾನದಂಡಗಳು
ವಯೋ ನಿವೃತ್ತಿಯಿಂದ, ಮುಂಬಡ್ತಿಯಿಂದ ಅಥವಾ ಮರಣಹೊಂದಿರುವ ಕಾರಣಗಳಿಂದಾಗಿ ಮೇಲ್ಕಾಣಿಸಿದ ಹುದ್ದೆಗಳು ಖಾಲಿಯಾಗಿದ್ದು, ಈ ನಾಲ್ಕು ವೃಂದದ ಹುದ್ದೆಗಳಲ್ಲಿ ಯಾರು ಕಾರ್ಯನಿರ್ವಹಿಸದೇ ಇದ್ದಲ್ಲಿ ನೇಮಕಾತಿಯ
ಮೀಸಲಾತಿಯನ್ನು ಅನುಸರಿಸಿ ಭರ್ತಿ ಮಾಡಿಕೊಳ್ಳಲು ಪಂಚಾಯತ್ ರಾಜ್ ಆಯುಕ್ತಾಲಯವು ಕೋರಿದೆ.
ಖಾಲಿ ಇರುವ ಸದರಿ ಹುದ್ದೆಗೆ ಸಿಬ್ಬಂದಿಯನ್ನು ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 886 ಗ್ರಾಪಂಕಾ 2016 ದಿನಾಂಕ 29-06-2020ರಲ್ಲಿ ಸೂಚಿಸಿರುವಂತೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ.
Grama Panchayat Recruitment 2024: ಈ ಹುದ್ದೆಗಳಿಗೆ ವಿದ್ಯಾರ್ಹತೆ ಏನು?
- ಬಿಲ್ ಕಲೆಕ್ಟರ್ ಅಥವಾ ಕರವಸೂಲಿಗಾರರು ಹುದ್ದೆಗಳಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
- ಇನ್ನು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ
- ಅದೇ ರೀತಿ ವಾಟರ್ ಆಪರೇಟರ್ ಹುದ್ದೆಗಳಿಗೆ ಕನಿಷ್ಠ 7ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಗ್ರಾಮ ಪಂಚಾಯತಿ ಸ್ವಚ್ಛತಾಗಾರರು ಹುದ್ದೆಗಳಿಗೆ ಯಾವುದೇ ವಿದ್ಯಾರ್ಹತೆ ಕಡ್ಡಾಯವಲ್ಲ. ಈ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯತಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Grama Panchayat Recruitment 2024:ನೇಮಕಾತಿ ಅಧಿಸೂಚನೆ ಪಿಡಿಎಫ್
Grama Panchayat Recruitment 2024: ನೇಮಕಾತಿ ಪ್ರಕ್ರಿಯೆ ಹೇಗೆ?
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್ ಹಾಗೂ ಸ್ವಚ್ಛತಾಗಾರರು ಹುದ್ದೆಗಳಿಗೆ ಆಯಾ ಜಿಲ್ಲಾ ಪಂಚಾಯ್ತಿಗಳು ನೇಮಕಾತಿ ಅಧಿಸೂಚನೆ ಹೊರಡಿಸಿ, ಜಿಲ್ಲಾ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿ, ಆಯ್ಕೆಪಟ್ಟಿ ಬಿಡುಗಡೆ ಮಾಡಲಿವೆ.
ರಾಜ್ಯದ ವಿವಿಧ ಜಿಲ್ಲೆಗಳ ಜಿಪಂ CEOಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿಲಿದ್ದು ಹಂತ ಹಂತವಾಗಿ ಅಧಿಸೂಚನೆ ಹೊರಡಿಸಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆ ಅನ್ವಯ ಆಯಾ ಜಿಲ್ಲೆಗಳ ಗ್ರಾಮ ಪಂಚಾಯತಿ ಖಾಲಿ
ಹುದ್ದೆಗಳಿಗೆ ಅರ್ಜಿ ಸಲಲಿಸಬಹುದಾಗಿದೆ. ಈ ಕುರಿತ ಹೆಚ್ಚನ ಮಾಹಿತಿಗಾಗಿ ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಇದನ್ನು ಸಹ ಓದಿ: SSC MTS ನೇಮಕಾತಿ 2024: SSLC ಆಗಿರುವವರಿಗೆ ಭರ್ಜರಿ 8326 ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಮಿಸ್ ಮಾಡದೇ ಅರ್ಜಿ ಸಲ್ಲಿಸಿ..!
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.