Kannada and Sanskrit Department Recruitment: ನಮಸ್ಕಾರ ಎಲ್ಲರಿಗೂ ಇಂದಿನ ಹೊಸ ನೇಮಕಾತಿ ಲೇಖಾನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖಾನದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಖಾಲಿಯಿರುವ ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್ ಹುದ್ದೆಯ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಅಧಿಸೂಚನೆಯ ಪ್ರಕಾರ ಅರ್ಹ ಅಥವಾ ಅರ್ಹತೆಗಳನ್ನು ಪೂರೈಸುವವರು ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು ಇನ್ನುಳಿದಂತೆ ಉದ್ಯೋಗ ಸಂಬಂದಿತ ಅರ್ಹತಾ ಮಾಹಿತಿಗಾಗಿ ಲೇಖಾನಾವನ್ನು ಸಂಪೂರ್ಣವಾಗಿ ಓದಿ.
Kannada and Sanskrit Department Recruitment
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉತ್ತರ ಕನ್ನಡ ಜಿಲ್ಲೆಯ (ಕಾರವಾರ) ಜಿಲ್ಲಾ ರಂಗಮಂದಿರದಲ್ಲಿ ಖಾಲಿ ಇರುವ ಹಿರಿಯ ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್ ಹುದ್ದೆಯನ್ನು ಪರಿಶಿಷ್ಟ ಪಂಗಡದ ಬ್ಯಾಕ್ಲಾಗ್ ಅಡಿ ಭರ್ತಿ ಮಾಡಲು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಹುದ್ದೆ ಕುರಿತು ಅರ್ಹತೆ, ಉದ್ಯೋಗ ಸ್ಥಳ, ಅರ್ಜಿಗೆ ಕೊನೆ ದಿನಾಂಕ, ಆಯ್ಕೆ ವಿಧಾನ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಕಾತಿ ಅಧಿಸೂಚನೆ
ಉದ್ಯೋಗ ಸ್ಥಳ :- ಉತ್ತರ ಕನ್ನಡ ಜಿಲ್ಲೆಯ (ಕಾರವಾರ) ಜಿಲ್ಲಾ ರಂಗಮಂದಿರ.
ಹುದ್ದೆ ಹೆಸರು :- ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್
ಹುದ್ದೆ ಸಂಖ್ಯೆ :- 01
ಹುದ್ದೆಯ ಮೀಸಲಾತಿ ವರ್ಗೀಕರಣ :- ಪರಿಶಿಷ್ಟ ಪಂಗಡ.
ಇದನ್ನು ಸಹ ಓದಿ: SCDCC ಬ್ಯಾಂಕ್ ನೇಮಕಾತಿ 2024: 123 ಸೆಕೆಂಡ್ ಡಿವಿಷನ್ ಕ್ಲರ್ಕ್ [SDA] ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!
Kannada and Sanskrit Department Recruitment ಅರ್ಹತೆಗಳು?
ಶೈಕ್ಷಣಿಕ ಅರ್ಹತೆ
ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿರಬೇಕು. ಇದರೊಂದಿಗೆ ಟೆಲಿಕಮ್ಯೂನಿಕೇಷನ್ (ಸೌಂಡ್ ಅಂಡ್ ಟಿವಿ) ನಲ್ಲಿ ಡಿಪ್ಲೊಮ ಶಿಕ್ಷಣ ಪಡೆದಿರಬೇಕು. ಕಡ್ಡಾಯವಾಗಿ ಈ ಶಿಕ್ಷನ ಹೊರತು ಬೇರೆ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
ವಯೋಮಿತಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 03-09-2024 ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್ ಹುದ್ದೆಗೆ ವೇತನ ಎಷ್ಟು?
ಎಲೆಕ್ಟ್ರೀಷಿಯನ್ ಕಂ ಸೌಂಡ್ ಸೂಪರ್ ವೈಸರ್ ಹುದ್ದೆಗೆ ವೇತನ ಶ್ರೇಣಿ : Rs.33,450-62,600.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಕರೆಯಲಾಗುತ್ತದೆ. ಅವರಿಗೆ ಸ್ಕಿಲ್ ಟೆಸ್ಟ್ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಇದನ್ನು ಸಹ ಓದಿ: AFMS ನೇಮಕಾತಿ 2024: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು 450 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!
ಅರ್ಜಿ ಸಲ್ಲಿಸುವ ವಿಧಾನ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಜಿ ನಮೂನೆಯನ್ನು ನೀಡಿದೆ. ಅದರಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಬರೆದು, ಜತೆಗೆ ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆಗಳನ್ನು ಲಗತ್ತಿಸಿ (ಜೆರಾಕ್ಸ್ ಪ್ರತಿಗಳು), ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಭರ್ತಿ ಮಾಡಿದ ಅರ್ಜಿಗಳನ್ನು ವಿಳಾಸ- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು -560002 ಇಲ್ಲಿಗೆ ತಲುಪಿಸತಕ್ಕದ್ದು.
ವಿದ್ಯಾರ್ಹತೆ, ಜನ್ಮ ದಿನಾಂಕ ಮತ್ತು ಮೀಸಲಾತಿ ಮುಂತಾದ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ಇತರೆ ಹೆಚ್ಚಿನ ವಿವರಗಳನ್ನು ತಿಳಿಯಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-09-2024 ರ ಸಂಜೆ 05-00 ಗಂಟೆಯೊಳಗೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಈಗಾಗಲೇ ಶುರುವಾಗಿರುತ್ತದೆ.
ಇದನ್ನು ಸಹ ಓದಿ: INDIAN NAVY CADET ENTRY SCHEME 2024: ಭಾರತೀಯ ನೌಕಾಪಡೆ 40 10+2 ಕೆಡೆಟ್ ಎಂಟ್ರಿ ಸ್ಕೀಮ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖ ಲಿಂಕ್ ಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆಯ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.