ನಮಸ್ಕಾರ ಎಲ್ಲರಿಗೂ ಇಂದಿನ ಹೊಸ ನೇಮಕಾತಿ ಲೇಖನಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಇಂದಿನ ಲೇಖಾನದಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ಇಂದ ಬಿಎಂಟಿಸಿ ಕಂಡಕ್ಟರ್ 214 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಅಶಕ್ತಮತ್ತು ಅರ್ಹತೆಯನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 19 ರಂದು ಡಿಸ್ಚಾನೆ ಬಿಡುಗಡೆ ಮಾಡಿದ್ದೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 18 ಮೇ ಎಂದು ತಿಳಿಸಲಾಗಿದ್ದು ಹುದ್ದೆಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಲೇಖವನ್ನು ಸಂಪೂರ್ಣವಾಗಿ ಓದಿ ಮತ್ತು ಶೇರ್ ಮಾಡಿ.
KEA BMTC ಕಂಡಕ್ಟರ್ ಉದ್ಯೋಗಗಳು 2024 ವಿವರಗಳು:
ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ – ಬಿಎಂಟಿಸಿ 214 ಕಂಡಕ್ಟರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಡೀಟೇಲ್ಸ್ ಇಲ್ಲಿ ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 214 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. , ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ಹುದ್ದೆಗಳು ಇವೆ. ಈ ಸದರಿ ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
KEA BMTC ಕಂಡಕ್ಟರ್ ನೇಮಕಾತಿ 2024 ಅಧಿಸೂಚನೆ
ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆ ಹೆಸರು : ನಿರ್ವಾಹಕ (ಕಂಡಕ್ಟರ್ )
ಹುದ್ದೆಗಳ ಸಂಖ್ಯೆ : 214
KEA BMTC ಕಂಡಕ್ಟರ್ ನೇಮಕಾತಿ 2024 ಅರ್ಹತಾ ಮಾನದಂಡಗಳು
ಶೈಕ್ಷಣಿಕ ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ಹನ್ನೆರಡನೇ ತರಗತಿ ಪಾಸ್. ಅಥವಾ 3 ವರ್ಷಗಳ ಡಿಪ್ಲೊಮ ಪಾಸ್.
ಮುಕ್ತ ಶಾಲೆ ಅಥವಾ ಮುಕ್ತ ವಿವಿಯಿಂದ ಪಿಯುಸಿ/ 12ನೇ ತರಗತಿಯನ್ನು ಅಥವಾ ಜೆಒಸಿ / ಜೆಎಲ್‌ಸಿ ಕೋರ್ಸ್‌ಗಳು ಮಾನ್ಯವಿಲ್ಲ. ಇವರು ಅರ್ಜಿ ಹಾಕಲು ಅರ್ಹರಲ್ಲ
ಇತರೆ ಅರ್ಹತೆ
ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರತಕ್ಕದ್ದು.
ಪುರುಷರ ಎತ್ತರ 160 CM, ಮಹಿಳೆಯರ ಎತ್ತರ 150 CM ಇರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕ 18-05-2024 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು ವರ್ಗಾವಾರು ಕೆಳಗಿನಂತೆ ಮೀರಿರಬಾರದು.
ಸಾಮಾನ್ಯ ವರ್ಗ – 35 ವರ್ಷಗಳು.
2A / 2B / 3A / 3B ಅಭ್ಯರ್ಥಿಗಳಿಗೆ 38 ವರ್ಷಗಳು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.
ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷಗಳು.
ನಿರ್ವಾಹಕ ಹುದ್ದೆಗಳಿಗೆ ವೇತನ ಶ್ರೇಣಿ : ರೂ.18660-25300
ತರಬೇತಿ ಅವಧಿ ಭತ್ಯೆ ಮತ್ತು ವೇತನ ಶ್ರೇಣಿ
ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕಾಲ ವೃತ್ತಿ ತರಬೇತಿಯಾಗಿ ನಿಯೋಜಿಸಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ ರೂ.9,100 ನೀಡಲಾಗುವುದು.
KEA BMTC ಕಂಡಕ್ಟರ್ ನೇಮಕಾತಿ 2024 ಅರ್ಜಿಗಳ ಫೀಸ್
ಅಪ್ಲಿಕೇಶನ್ ಶುಲ್ಕ ವಿವರ ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.
KEA BMTC ಕಂಡಕ್ಟರ್ ನೇಮಕಾತಿ 2024 ಪ್ರಮುಖ ದಿನಾಂಕಗಳು
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 19-04-2024
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18-05-2024
ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 18-05-2024
KEA BMTC ಕಂಡಕ್ಟರ್ ನೇಮಕಾತಿ 2024 ವಿಧಾನ
ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಿ, ನಂತರ ಇದರಲ್ಲಿನ ಶೇಕಡ.75 ಅಂಕಗಳು ಹಾಗೂ ಶೈಕ್ಷಣಿಕ ಅರ್ಹತೆಯ ಶೇಕಡ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
KEA BMTC ಕಂಡಕ್ಟರ್ ನೇಮಕಾತಿ 2024 ಉದ್ಯೋಗಗಳ ವಿವರ
ಹುದ್ದೆಯ ಹೆಸರು | ಬಿಎಂಟಿಸಿ ನಿರ್ವಾಹಕರು |
ವಿವರ | ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ |
ಪ್ರಕಟಣೆ ದಿನಾಂಕ | 2024-04-19 |
ಕೊನೆ ದಿನಾಂಕ | 2024-05-18 |
ಉದ್ಯೋಗ ವಿಧ | ಪೂರ್ಣಾವಧಿ |
ಉದ್ಯೋಗ ಕ್ಷೇತ್ರ | ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸರ್ಕಾರಿ ಉದ್ಯೋಗ |
ಇದನ್ನು ಸಹ ಓದಿ: ಆರ್ಮಿ ಕ್ಯಾಂಟೀನ್ ನೇಮಕಾತಿ 2024. 10 ಪಾಸ್ ಆಗಿರುವ ಅಭ್ಯರ್ಥಿಗಳು ಆರ್ಮಿ ಕ್ಯಾಂಟೀನ್ ನೇಮಕಾತಿಯ 2250 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
KEA BMTC ಕಂಡಕ್ಟರ್ ನೇಮಕಾತಿ 2024 ಅರ್ಜಿ ಸಲ್ಲಿಸುವುದು ಹೇಗೆ
- ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
- ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
- ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
- ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
- ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
- ಹಂತ 6: ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ಅರ್ಜಿ ನಮೂನೆಯ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.
KEA BMTC ಕಂಡಕ್ಟರ್ ನೇಮಕಾತಿ 2024 ನೋಟಿಫಿಕೇಶನ್
ನೇಮಕಾತಿ ಸಂಸ್ಥೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
ಸಂಸ್ಥೆಯ ಹೆಸರು | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
ವೆಬ್‌ಸೈಟ್ ವಿಳಾಸ | https://mybmtc.karnataka.gov.in/english |
ಇದನ್ನು ಸಹ ಓದಿ: UPSC ನೇಮಕಾತಿ 2024. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ವತಿಯಿಂದ 506 ಸಹಾಯಕ ಕಮಾಂಡೆಂಟ್‌ಗಳ ಹುದ್ದೆಗಳ ನೇಮಕಾತಿ
KEA BMTC ಕಂಡಕ್ಟರ್ ನೇಮಕಾತಿ 2024 ಪ್ರಮುಖ ಜಾಲತಾಣಗಳು
ಅಧಿಸೂಚನೆ ಪಿಡಿಎಫ್: ಇಲ್ಲಿಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು: ಇಲ್ಲಿಕ್ಲಿಕ್ ಮಾಡಿ
ವಾಟ್ಸಪ್ಪ್ ಗ್ರೂಪ್: ಇಲ್ಲಿಕ್ಲಿಕ್ ಮಾಡಿ
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.