MAEF ನೇಮಕಾತಿ 2024 MAEF ನೇಮಕಾತಿ 2024 ರ ಎಲ್ಲಾ ಇತ್ತೀಚಿನ ಮತ್ತು ಮುಂಬರುವ ಉದ್ಯೋಗ ಪ್ರಕಟಣೆಗಳು ಜನವರಿ 13, 2024 ರಂದು ಹೊರಬಿದ್ದಿವೆ ಮತ್ತು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ maef.nic.in ನೇಮಕಾತಿ 2024 ರಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಶಿಕ್ಷಕರ ಕೊರತೆ ಸಮಸ್ಯೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿರುವ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳು ಸೇರಿದಂತೆ 700 ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯೂ ಸದ್ಯ ಅಸ್ತು ಅಂದಿದ್ದು ಸದ್ಯ 100 ಶಾಲೆಗಗಳಿಗೆ ಟಾಲಾ 7 ಶಿಕ್ಷಕರಂತೆ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಮ್ಮನ್ನು ಫಾಲ್ಲೋ ಮಾಡಿ.
MAEF ಮೇಫ್ ನೇಮಕಾತಿ 2024
ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀವು ಕಾಣಬಹುದು. MAEF ಉದ್ಯೋಗಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಲೇಖನವನ್ನು ಎಚ್ಚರಿಕೆಯಿಂದ ಓದಬೇಕು. MAEF ನೇಮಕಾತಿಯು 2024 ಸಾಲಿನ ಶಿಕ್ಷಕರ ನೇಮಕಾತಿ ಕುರಿತ ಎಲ್ಲ ಮಾಹಿತಿಗಳನ್ನು ಲೇಖನದ ಮೂಲಕ ಸಂಪೂರ್ಣವಾಗಿ ನಿಮ್ಮೊಂದಿಗೆ ಶೇರ್ ಮಾಡಲಿದ್ದೇವೆ. ಇದರಿಂದ ಅಭ್ಯರ್ಥಿಗಳು MAEF ಶಿಕ್ಷಕ ಹುದ್ದೆಗಳ ಉದ್ಯೋಗಾವಕಾಶದ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.
100 ಶಾಲೆಗಳು: ಲೋಕಸಭೆ ಚುನಾವಣೆ 2024ರ ಮಾದರಿ ಚುನಾವಣಾ ನೀತಿ ಸಂಹಿತೆ ಕೊಂಚ ಸಡಿಲಗೊಳಿಸಿರುವ ಕಾರಣ ಕರ್ನಾಟಕ ಸರ್ಕಾರ ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಒಪ್ಪಿಗೆಯನ್ನು ನೀಡಿದೆ. 2018-19ನೇ ಸಾಲಿನಲ್ಲಿ ಆರಂಭಿಸಲಾದ 100 ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರತಿ ಶಾಲೆಗೆ 7 ಶಿಕ್ಷಕ ಹುದ್ದೆಗಳಂತೆ ಒಟ್ಟು 700 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಮೇ 22ರಂದು ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ನೇಮಕಾತಿಗೆ ಅರ್ಜಿ ಸಲ್ಲಿಕೆಯು ಪ್ರರಂಭವಾಗಲಿದೆ.
MAEF ಮೌಲಾನಾ ಆಜಾದ್ ಶಿಕ್ಷಕರ ನೇಮಕಾತಿ 2024
ಹುದ್ದೆಗಳು | ಹುದ್ದೆಗಳ ಸಂಖ್ಯೆ |
ಮುಖ್ಯೋಪಾಧ್ಯಾಯ | 100 |
ಕನ್ನಡ | 100 |
ಆಂಗ್ಲ | 100 |
ಉರ್ದು ಭಾಷೆ | 100 |
ಗಣಿತ | 100 |
ವಿಜ್ಞಾನ | 100 |
ಸಮಾಜ ವಿಜ್ಞಾನ | 100 |
ಒಟ್ಟು ಹುದ್ದೆಗಳು | 700 |
ವಿವಿಧ ಮಾಧ್ಯಮದ ಮೌಲಾನ ಆಜಾದ್ ಮಾದರಿ ಶಾಲೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮುಖ್ಯೋಪಾಧ್ಯಯರು ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರ ಕೊರತೆ ಇದೆ. ಖಾಯಂ ಶಿಕ್ಷಕರು ಇಲ್ಲದ ಕಾರಣ ಹೊರಗುತ್ತಿಗೆ ಆಧಾರದ ಮೇಲೆಯೇ ಅನೇಕ ಶಾಲೆಗಳಲ್ಲಿ ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
MAEF ಮೌಲಾನಾ ಆಜಾದ್ ಶಿಕ್ಷಕರ ನೇಮಕಾತಿ ಅಧಿಸೂಚನೆ
ಹಲವು ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗಿಂತ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶಿಕ್ಷಕರ ಸಂಖ್ಯೆಯೇ ಹೆಚ್ಚಾಗಿದೆ. ಆದ್ದರಿಂದ ಮೌಲಾನ ಆಜಾದ್ ಮಾದರಿ ಶಾಲೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಇಡಲಾಗಿತ್ತು. ಆರ್ಥಿಕ ಇಲಾಖೆಗೆ ಹೊಸ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈಗ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಹಸಿರು ನಿಶಾನೆ ಕೊಟ್ಟಿದೆ.
ಕರ್ನಾಟಕ ಸರ್ಕಾರ 2017-18ರಲ್ಲಿ 100 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭ ಮಾಡಿತು. ಇದಕ್ಕಾಗಿ ಹಣಕಾಸು ಇಲಾಖೆಯು 100 ಮುಖ್ಯೋಪಾಧ್ಯಾಯರು ಮತ್ತು ಅತಿಥಿ ಅಧ್ಯಾಪಕರು ಸೇರಿದಂತೆ 700 ಬೋಧಕ ಹುದ್ದೆಗಳಿಗೆ ಅನುಮೋದನೆ ನೀಡಿತ್ತು. 2018-19ರಲ್ಲಿ ಮತ್ತೆ 100 ಶಾಲೆಗಳನ್ನು ಆರಂಭಿಸಲಾಯಿತು. ಆದರೆ ಈ ಶಾಲೆಗಳಿಗೆ ಯಾವುದೇ ಬೋಧಕ ಹುದ್ದೆಗಳನ್ನು ನೇಮಕ ಮಾಡಲು ಹಣಕಾಸು ಇಲಾಖೆ ಅನುಮೋದನೆ ನೀಡಲಿಲ್ಲ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ 100 ಶಾಲೆಗಳಿಗೆ ಮುಖ್ಯೋಪಾಧ್ಯಾಯರು ಸೇರಿದಂತೆ 929 ಅತಿಥಿ ಶಿಕ್ಷಕರನ್ನು ನೇಮಿಸಿ ಅಂದಿನಿಂದಲೂ ಸ್ವಂತ ನಿಧಿಯಿಂದ ವೇತನ ಪಾವತಿಸಿ ನಡೆಸಿಕೊಂಡು ಬರುತ್ತಿತ್ತು.
ಇದನ್ನು ಸಹ ಓದಿ: BPNL ನೇಮಕಾತಿ 2024. ಭಾರತೀಯ ಪಶುಪಾಲನಾ ನಿಗಮದ ಹೊಸ ನೇಮಕಾತಿ 5250 ಹುದ್ದೆಗಳಿಗೆ SSLC, PUC ಆಗಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.
2024ರ ಆರಂಭದಲ್ಲಿ ಇಲಾಖೆಯಲ್ಲಿನ ಹಣದ ಕೊರತೆಯಿಂದಾಗಿ, ಈ 929 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆಯದ ಕಾರಣ, ನಾಲ್ಕು ತಿಂಗಳಿನಿಂದ ವೇತನ ಸಿಕ್ಕಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಈಗ ಆರ್ಥಿಕ ಇಲಾಖೆ 2018-19ರಲ್ಲಿ ಆರಂಭವಾದ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಒಪ್ಪಿಗೆಯನ್ನು ನೀಡಿದೆ.
I am a web developer and blogger, YouTube creator working since 2021. We are going to provide accurate job information for our audience through this jobskannada.com website You can contact us through our email.